Thursday, February 3, 2011

ಇದು ಮೇ ಹುಡುಗಿಯ ಶುರುವಾತ್...




ಅಂದು ಜುಲೈ 5, 1997, ಮಳೆಗಾಲ.  ಸಿಕ್ಕಾಪಟ್ಟೆ ಜೋರಾಗಿ ಮಳೆ ಸುರೀತಿತ್ತು, ಆದ್ರೆ ಸಂಜೆ ೫ ಗಂಟೆಯೊಳಗೆ ಹೋಗ್ಬೇಕಿತ್ತು. ಮಳೆ ಸ್ವಲ್ಪ ಕಡೆಮೆ ಆಗ್ತಿದ್ದಂಗೆ, ಅಪ್ಪಾಜಿ, 'ಅಶ್ವಿನಿ ಬೇಗ ಹೊರಡೋಣ ಬಾ ಲೇಟ್ ಆಯ್ತು’ ಅನ್ನೊವಷ್ಟರಲ್ಲಿ ಮನೆಯಲ್ಲಿ ಎಲ್ಲರಿಗೂ ನಮಸ್ಕಾರ ಮಾಡಿ ಹಿರಿಯರ ಆಶೀರ್ವಾದಗಳೊಂದಿಗೆ ನನ್ನ ಸೂಟ್ಕೇಸ್, ಗಣೇಶ,ಸಾಯಿ ಬಾಬಾ,ಕುಂಕುಮ,ವಿಭೂತಿ ಎಲ್ಲ ಪೂಜಾ ಸರಂಜಾಮುಗಳೊಂದಿಗೆ ಪುಸ್ತಕಗಳನ್ನೊಳಗೊಂಡ ಬ್ಯಾಗ್ ಎತ್ಕೊಂಡು ನಮ್ಮ ಕೈನೆಟಿಕ್ ಹೊಂಡಾ ಮೇಲೆ ಹೊರಟಿದ್ದಾಯ್ತು... ಅಮ್ಮ, ಅಕ್ಕನ ಕಣ್ಣುಗಳು ಹನಿಗೂಡಿದ್ದವು.. ಆದ್ರೆ ನನ್ಗೆ ಸಿಕ್ಕಾಪಟ್ಟೆ ಖುಷಿ ಆಗ್ತಿತ್ತು..! ಅಂತೂ ನಾನು ನನ್ನ ಕನಸಿನ ಶಾಲೆಗೆ ಹೋಗ್ತಿದಿನಿ ಅಂತ.
ಧಾರವಾಡ ನವೋದಯ ವಿದ್ಯಾಲಯದಲ್ಲೇ ಓದ್ಬೇಕು ಅಂತ ಮೂರು ವರ್ಷ ಕಷ್ಟಪಟ್ಟಿದ್ದೆ. ಅಲ್ಲಿಯ ರೂಲ್ಸ್ ಪ್ರಕಾರ ಯಾವ ಜಿಲ್ಲೆಯ ನವೋದಯ ಶಾಲೆ ಸೇರ್ಬೇಕು ಆಂತೇವೋ ಅದೇ ಜಿಲ್ಲೆಯ ಶಾಲೆಯಲ್ಲಿ ಓದಿರ್ಬೇಕು, ಅಂದ್ರೆ ೩-೫ನೇ ಕ್ಲಾಸ್ ತನಕ ಆ ಜಿಲ್ಲೆಯಲ್ಲೇ ಓದಿರಬೇಕು ಹಾಗಾಗಿ, ನಮ್ಮೂರು ಬೆಳಗಾಂ ಜಿಲ್ಲೆಯ ದೊಡ್ಡವಾಡದಿಂದ ಧಾರವಾಡ ಜಿಲ್ಲೆಯ ಉಪ್ಪಿನ-ಬೆಟಗೇರಿಗೆ ಮೂರು ವರ್ಷ ಬಸ್ನಲ್ಲಿ  ಟ್ರಾವೆಲಿಂಗ್ ಮಾಡಿದೆ. ಶಾಲೆ ಮುಗಿದ ಮೇಲೆ ಹೂಗಾರ್ ಸರ್ ಮನೆಗೆ ಟ್ಯೂಶನ್ ಗೆ ಹೋಗ್ತಿದ್ದೆ. ದಿನಾಲು ರಾತ್ರಿ ಮನೆಗೆ ಬರೋದು ೯, ಒಮ್ಮೊಮ್ಮೆ ೧೦!
ಜವಾಹರ ನವೋದಯ ವಿದ್ಯಾಲಯ(Central govt. Residential School affiliated to Delhi) ದ ಗೇಟ್ ಎಂಟರನ್ಸ್ ಗೆ ಸೆಕ್ಯುರಿಟಿ ನಮ್ಮ ಗಾಡಿಯನ್ನ ತಡೆದ... ತಿಂಡಿ ಏನು ತಂದಿಲ್ಲ ತಾನೆ.... ಪ್ರಿನ್ಸಿಪಾಲ್ ತುಂಬ ಸ್ಟ್ರಿಕ್ಟ್ ಅಂತ ಎಚ್ಚರಿಕೆ ಕೊಟ್ಟು, ನೋಡಿ ಸರ್, ಹೀಗೆ ನೇರ ಹೋಗಿ ರೈಟ್ ಟರ್ನ್ ಮಾಡಿ  ಫಸ್ಟ್ ರೈಟ್ ಹೋಗಿ ಅಲ್ಲಿ ಈ ನ್ಯೂ ಕಮರ್ ಮಕ್ಕಳನ್ನು ’ಹೌಸ್ ಮದರ್’ ರಿಜಿಸ್ಟರ್ ಮಾಡ್ಕೊಳ್ತಾ  ಇರ್ತಾರೆ, ಭೇಟಿ ಮಾಡಿ ಅಂದ. ಅಲ್ಲಿಯ ವಾತಾವರಣ, ಡಾರ್ಮೇಟ್ರಿ ಗ್ರಿಲ್ಲ್ಸ್, ವಾರ್ಡನ್ ನೋಡಿ ನಂಗೆ ಯಾಕೋ ಸಿನೇಮಾಗಳಲ್ಲಿ ನೋಡಿದ ಜೈಲು ನೆನಪಾಗ್ತಿತ್ತು...! ಎಲ್ಲ ಫಾರ್ಮ್ಯಾಲಿಟೀಸ್ ಮುಗಿಸಿ ಅಪ್ಪಾಜಿ ನನ್ನ ಕೆನ್ನೆಗೆ ಮುತ್ತಿಟ್ಟು ಚೆನ್ನಾಗಿ ಓದು ಮಗಳೆ ಏನಾದ್ರು ಬೇಕಿದ್ರೆ ಪತ್ರ ಬರಿ, ಮುಂದಿನ ತಿಂಗಳು ಫಸ್ಟ್ ಸಂಡೆ ಬರ್ತೀವಿ ಅಂತ ಹೊರಟೇ ಬಿಟ್ರು...
 ಗಂಟಲು ಬಿಗಿಗೊಂಡಿತ್ತು.. ನಾನು ಯಾವತ್ತು ಅಮ್ಮ-ಅಪ್ಪಾಜಿಯರನ್ನು ಬಿಟ್ಟು ಇದ್ದವಳೇ ಅಲ್ಲ (ಓವರ್ ಅಟ್ಯಾಚ್ಮೆಂಟ್)...  ಸಂಜೆ ೬.೩೦, ಆಚೆ ನಿಂತು ಅಳ್ತಾ ಇದ್ದೆ... ನನ್ನ ಸೀನಿಯರ್ ಬಂದು ’ಬಾ ಪುಟ್ಟಿ ಅಳಬಾರ್ದು ನಾವೆಲ್ಲ ಇದೀವಿ’ ಅಂತ ಸಮಾಧಾನ ಮಾಡಿ ಒಳಗೆ ಕರೆದುಕೊಂಡು ಹೋದ್ಲು. ಸಂಜೆ ೭.೧೫, ’ಹೌಸ್ ಮದರ್’ ಬಂದ್ರು... ಎಲ್ಲ ರೂಲ್ಸ್ ಹೇಳ್ತಾ ಹೇಳ್ತಾ ಅದೊಂದು ದೊಡ್ಡ ಪಟ್ಟೀನೇ ಆಯ್ತು... ನನ್ನ ಪರ್ಮಿಶನ್ ಇಲ್ದೆ ಯಾರು ಗ್ರಿಲ್ನಿಂದ ಆಚೆ ಬರೊ ಹಾಗಿಲ್ಲ, ತಿಂಡಿ,ಚಾಕೊಲೆಟ್ಸ್,ಬಿಸ್ಕತ್ಸ್ ಇಟ್ಕೊಳೋ ಹಾಗಿಲ್ಲ, ಒಬ್ಬೊಬ್ರೆ ಓಡಾಡೊ ಹಾಗಿಲ್ಲ, ಎಲ್ಲರೂ ಒಟ್ಟಿಗೆ ಲೈನ್ ನ್ನಲ್ಲಿ ಹೋಗ್ಬೇಕು ಅದು ಇದು ಅಂತ ನೂರೆಂಟು...! 
ಅಂತೂ ಹೊಸ ಲೈಫ್ ಶುರು ಆಯ್ತು... ಹೊಸ ನೆಪಗಳೂ ಶುರು ಆದವು ಮೊದಲನೇ ಪತ್ರದೊಂದಿಗೆ...
 “ ಪ್ರೀತಿಯ ಅಪ್ಪಾಜಿ-ಮಮ್ಮಿ, ನೀವೆಲ್ಲ ಚೆನ್ನಾಗಿರಬಹುದು. ನಾನು ಇಲ್ಲಿ ಚೆನ್ನಾಗಿಲ್ಲ, ನನಗೆ ನಿಮ್ಮ ನೆನಪು ಸದಾ ಕಾಡುತ್ತಿದೆ ನಿಮ್ಮನ್ನು ಬಿಟ್ಟು ನಾನು ಇರುವುದಿಲ್ಲ, ನನಗೆ ಇಲ್ಲಿ ’ಪಂಜರದಲ್ಲಿ ಪಕ್ಷಿಯನ್ನ’ ಕೂಡಿಟ್ಟ ಹಾಗೆ ಅನಿಸುತ್ತಿದೆ. ಇಲ್ಲಿ ಸೊಳ್ಳೆಗಳು ತುಂಬ ಇವೆ, ಛಳಿ ಜಾಸ್ತಿ, ಗಾಳಿಯ ಸುಯ್ ಸುಯ್ ಶಬ್ದ  ನನಗೆ ಬಹಳ ಭಯವಾಗತ್ತೆ. ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗಿ... ಇಂತಿ ನಿಮ್ಮ ಪ್ರೀತಿಯ ಹಾಗೂ ಅಳುತ್ತಿರುವ:’( -ಮಗಳು”. 
ಮರುದಿನವೇ ಪೋಸ್ಟ್ ಮಾಡಿಬಿಟ್ಟೆ. ೪ ದಿನಗಳಾದ್ರೂ ಮನೆಯಿಂದ ಯಾರ ಸುಳಿವೂ ಇಲ್ಲ... (ಅಪ್ಪಾಜಿ ಡಿ.ಲಿಟ್ ರಿಸರ್ಚ್ ವರ್ಕನಲ್ಲಿ ಬಿಜಿ)..... ಒಂದು ದಿನ ಸಂಜೆ ಗೇಮ್ಸ್ ಮುಗಿಸಿ ಬರೋವಾಗ ಗೇಟ್ ಹತ್ತಿರ ನೋಡಿದೆ... ಓಡಿ ಹೋಗಿ ಬಿಡ್ಲಾ... ಮತ್ತೆ ಯೋಚಿಸಿ ಛೆ.. ಬೇಡ ಅಂತ ಸೀದಾ ಪ್ರಿನ್ಸಿಪಾಲ್ ಮನೆಗೇ ಹೆಜ್ಜೆ ಇಟ್ಟೆ... ಸರ್... ಸರ್... ’ಬಾ ಮಗು ಏನು ವಿಷಯ’... ’ ಸರ್, ನಾನು ಮನೆಗೆ ಹೋಗ್ಬೇಕು ದಯವಿಟ್ಟು ನನ್ನನ್ನು ಆಚೆ ಬಿಟ್ಟು ಬಿಡಿ’ ಅಂತ ಹೇಳ್ತಿದ್ದಂಗೆನೇ ನಮ್ಮ ಪ್ರಿನ್ಸಿಪಾಲ್ ಕೋಪ ನೆತ್ತಿಗೆ ಏರಿ ’ ಚೋಟುದ್ದ ಇಲ್ಲ ನೀನು, ಬಂದು ವಾರ ಕೂಡ ಆಗಿಲ್ಲ ಎಷ್ಟು ಧೈರ್ಯ ನಿನಗೆ ಹಾಗೆ ಕೇಳೋಕೆ’ ಅಂತ ನನ್ನ ಎರಡ  ಕೆನ್ನೆಗಳನ್ನು ಹಿಂಡಿ, ಕಣ್ಣಗಲಿಸಿ ಬೈದು ಕಳಿಸಿಬಿಟ್ಟಿದ್ರು. ಬಹುಶಃ ಆ ನಮ್ಮ ಪ್ರಿನ್ಸಿ ಮನೆಗೆ ಹೋಗುವ ಧೈರ್ಯ ಮಾಡಿದ್ದು ನಾನೇ ಮೋದ್ಲು ಅನ್ಸತ್ತೆ...! ಆಮೇಲೆ ಆ ಧೈರ್ಯ ಮಾಡ್ಲೇ ಇಲ್ಲ ಬಿಡಿ... ಆದರೂ ’ಅಳುವ ಅಶ್ವಿನಿ’ ಅಂತ ಫೇಮಸ್ ಆಗ್ಬಿಟ್ಟಿದ್ದೆ...
ನಮ್ಮ ವಿದ್ಯಾಲಯದಲ್ಲಿ ಸ್ಟಡೀಸ್, ಸ್ಪೋರ್ಟ್ಸ್ ಗಳೊಂದಿಗೆ CCA (Co-curricular Activities) ಕೂಡ ನಡೀತಿತ್ತು. ನಾನು ಅಲ್ಲಿ ಸೇರಿದ ಮೇಲೆ  ಫಸ್ಟ್ ಆಕ್ಟಿವಿಟಿ ಎಲ್ಲ ೬ನೇ ಕ್ಲಾಸ್ ನವರಿಗೂ ‘Hindi calligraphy competition’ ಇತ್ತು. ಆಗ ನನ್ಗೆ ಫ಼ಸ್ಟ್ ಪ್ಲೇಸ್ ಬಂದಿದ್ದು ಕೇಳಿ ತುಂಬಾ ಖುಶಿ ಆಗಿತ್ತು... ಹೀಗೆ ಎಲ್ಲ ಒಕೆಶ್ನಲ್ ಅನುಗುಣವಾಗಿ ಇಂಟರ್ ಹೌಸ್ ಸಿಂಗಿಂಗ್, ಡಾನ್ಸ್, ಸ್ಕಿಟ್ಸ್, ಫ್ಯಾನ್ಸಿ ಡ್ರೆಸ್, ಡ್ರಾಯಿಂಗ್... ಇತ್ಯಾದಿ ಕಾಂಪಿಟಿಶನ್ಸ್ ಕಂಡಕ್ಟ್ ಮಾಡ್ತಿದ್ರು.
 ಆಗ  ಮೊದಲನೆ ಹಬ್ಬ ’ಪಂಚಮಿ ಹಬ್ಬ’ ಹಾಗಾಗಿ ಜನಪದ ಗೀತೆಗಳ ಸ್ಪರ್ಧೆ ಇತ್ತು. ಎಲ್ಲರ ತಯಾರಿ ಭರ್ಜರಿಯಾಗಿ ನಡೆದಿತ್ತು... ಜ್ಯೂನಿಯರ್ ಸೆಕ್ಶನ್ (೬-೮) ನಮ್ಮ ಉಜ್ಜಯನಿ ಹೌಸ್ (ಕಂಚಿ,ನಲಂದ,ಉಜ್ಜಯನಿ) ನಲ್ಲಿ ಇಬ್ಬರು ರೆಡಿ ಇದ್ದರು ಮೂರನೇ ಪಾರ್ಟಿಸಿಪೆಂಟ್ ಗೆ ನಮ್ಮ ಹೌಸ್ ಲೀಡರ್ ಹಾಗೂ ಹೌಸ್ ಮಾಸ್ಟರ್ ಹುಡುಕಾಡ್ತಿದ್ರು... ಆಮೇಲೆ ಹೌಸ್ ಲೀಡರ್ ನೇತ್ರ ಅಕ್ಕ ’ ಅಪ್ಪಿ 6th std ನಲ್ಲಿ ಯಾರಾದ್ರು ಹಾಡ್ತೀರಾ...’ ಅಂತ ಕೇಳಿದ್ರೂ ನಾನು ಸುಮ್ನೇ ಇದ್ದೆ (ಸ್ವಲ್ಪ ರಿಸರ್ವ ಪಾರ್ಟಿ) ಒಬ್ಬೊಬ್ರನ್ನೆ ಹಾಡಿಸುವಾಗ ನನ್ನ ಸರದಿ ಬಂತು.. ಮೆದು ದನಿಯಲ್ಲಿ ’ಮಾಯದಂತ ಮಳೆ ಬಂತಣ್ಣ’ ಹಾಡು ಹೇಳಿದ್ದೇ ತಡ ನೇತ್ರ ಅಕ್ಕ ನನ್ನ ಮುದ್ದಾಡಿ ’ನೋಡು ಪುಟ್ಟಿ ನೀನು ತುಂಬ ಚೆನ್ನಾಗಿ ಹಾಡ್ತಿಯ, ಚೆನ್ನಾಗಿ ಪ್ರ್ಯಾಕ್ಟೀಸ್ ಮಾಡು ಆ ನಲಂದ ಹೌಸ್ ದೀಪಗೆ ನೀನೇ ಒಳ್ಳೇ ಕಾಂಪಿಟಿಟರ್, ಆಲ್ ದ ಬೆಸ್ಟ್ ಅಂತ ಹೇಳಿ ಆಮೇಲೆ ಎಲ್ಲ ನಮ್ ನಮ್ ಪ್ಲೇಸ್ಗಳಿಗೆ ಹೋದೆವು. ಕಾಂಪಿಟೇಶನ್ ಡೇ ಬಂದೇ ಬೀಡ್ತು... ನನ್ನ ಹೆಸರೂ ಕೂಗಿದ್ರು...  ಅಪ್ಪಾಜಿ ನಾನು ನವೋದಯಕ್ಕೆ ಸೆಲೆಕ್ಶನ್ ಆಗಿರೋ ಖುಶಿಗೆ ಕೊಡಿಸಿದ್ದ ಲೆಮನ್ ಯಲ್ಲೊ ಕಲರ್ ಫ್ರಿಲ್  ಫ್ರಾಕ್ ಹಾಕ್ಕೊಂಡು ನನ್ನ ಇಷ್ಟವಾದ ಮಾಯದಂತ ಮಳೆ ಬಂತಣ್ಣ ಹಾಡನ್ನು ಅತೀ ಎತ್ತರದ ಧ್ವನಿಯಲ್ಲಿ ಹಾಡಿದ್ದನ್ನು ಕೇಳಿ ನನ್ನ ಕೆನ್ನೆ ಹಿಂಡಿದ ನಮ್ಮ ಪ್ರಿನ್ಸಿ ಆಶ್ಚರ್ಯದಿಂದ,ಖುಶಿಯಿಂದ ನೋಡ್ಥಿದ್ರು...
 ಎಲ್ಲ ಪಾರ್ಟಿಸಿಪೆಂಟ್ಸ್ ಮುಗಿದ್ರು. ರಿಸಲ್ಟ್ ಹೇಳೆ ಬಿಟ್ರು... ಫ಼ಸ್ಟ್ ಪ್ಲೇಸ್ ಗೋಸ್ ಟು ಉಜ್ಜಯನಿ ಹೌಸ್ ಅಶ್ವಿನಿ... ಅಂತೂ ನಲಂದ ಹೌಸ್ ದೀಪನ್ನ ಸೋಲ್ಸಿರೋ ಖುಶಿ ಎಲ್ಲರಿಗೂ ಆಶ್ಚರ್ಯ ತಂದಿತ್ತು... ಅವತ್ತಿನಿಂದ ’ಅಳುವ ಅಶ್ವಿನಿ’, ’ಹಾಡುವ ಅಶ್ವಿನಿ ಅಂತ ಆ ವಿದ್ಯಾಲಯದಲ್ಲಿ ಫೇಮಸ್ ಆದ್ಲು...!
ನನ್ನ ಅಕ್ಕ (ಹಿಂದೂಸ್ತಾನಿ ಗಾಯಕಿ)ನ ತಂಗಿಯಾಗಿದ್ದಕ್ಕೆ ಸಾರ್ಥಕ ಅನ್ಸಿತ್ತು, ಆದ್ರೆ ಒಂದು ದಿನವೂ ಅವಳ ಜೊತೆ ಕೂತ್ಕೊಂಡು ಹಾಡು ಹೇಳಿಸಿಕೊಳ್ಳಲೇ ಇಲ್ಲ....! ಇಂದಿಗೂ ಇಲ್ಲ....!

ಹೇಳೋದ್ ಮರ್ತಿದ್ದೆ:
ರೆಸಿಡೆನ್ಶಿಯಲ್ ಸ್ಕೂಲ್ ಅಂದ್ರೆ ಗೊತ್ತೇ ಇರ್ಲಿಲ್ಲ... ತಿಂಗಳಿಗೊಮ್ಮೇ ಪೇರೆಂಟ್ಸ್ ಮೀಟ್ ಮಾಡೋದು, ಬೇಸಿಗೆ, ಚಳಿಗಾಲದ ರಜೆಗಷ್ಟೇ ಮನೆಗೆ ಹೋಗೋದು ಅಂತ :( . ಬೇಕಾದಾಗ ಮನೆಗೆ ಹೋಗಿ ಬರಬಹುದು ಅನ್ಕೊಂಡಿದ್ದೆ. ಈ ಬಗ್ಗೆ ಅಪ್ಪಾಜಿನೂ  ನನಗೆ ಹೇಳಿರ್ಲಿಲ್ಲ. ನಾನು ಅನ್ಕೊಂಡಿದ್ದೇ ಸತ್ಯ ಅನ್ಕೊಂಡು ಮೆರಿಟ್ ಸೀಟನ್ನಷ್ಟೇ ಟಾರ್ಗೇಟ್ ಮಾಡ್ಕೊಂಡಿದ್ದೆ.

(ಮುಂದುವರಿಸಬೇಕಾ...?)


ಚಿತ್ರ ಕೃಪೆ: vectorstock

27 comments:

  1. 1992-93ರಲ್ಲಿ ನಾನು ಕೋಲಾರ ಜಿಲ್ಲೆಯಲ್ಲಿರೋ ನವೋದಯಗೆ ಎಂಟ್ರೆನ್ಸ್ ಎಕ್ಸ್ಸಾಮ್ ಬರೆದಿದ್ದೆ.. ಆಸ್ಕೂಲ್ ನವರ ಬ್ಯಾಡ್ ಲಕ್.. ನನಗೆ ಸೀಟು ಸಿಗಲಿಲ್ಲ :-) ಅದರಲ್ಲು.. ನವೋದಯ ಶಾಲೆಗೆ ಜಾಗ ಕೊಟ್ಟಿದ್ದಿದ್ದು ನಮ್ಮ ತಂದೆ ಕೆಲ್ಸ ಮಾಡ್ತಿದ್ದ ಸರ್ಕಾರಿ ಸಂಸ್ಥೆಯ ಜಾಗದಲ್ಲಿ... ಅಲ್ಲಿನ ಪ್ರಿನ್ಸಿಪಾಲ್ ರಿಂದ ಫ್ಯೂನ್ ವರೆಗೂ ನಮ್ಮ ತಂದೆಗೆ ಪರಿಚಯ ಇದ್ರು. ಅಲ್ಲಿ ನನಗೆ ಸ್ಪೆಷಲ್ ಟ್ಯೂಷನ್ನು ಇತ್ತು.. ಆದ್ರೂ ಸೆಲೆಕ್ಟ್ ಆಗ್ಲಿಲ್ಲ. :-) ಈಗ್ಲೂ ಆ ನವೋದಯ ಸ್ಕೂಲ್ ಕಡೆಗೆ ಹೋದಾಗಲೆಲ್ಲ... ನನ್ನಲ್ಲಿ ನಾನು ಕೇಳ್ಕೊಳ್ಳೋದು.. ಅಕಸ್ಮಾತ್ ನಾನು ಈ ಶಾಲೆಯಲ್ಲಿ ಓದಿದ್ದಿದ್ರೆ ನಾನು ಈಗ ಏನಾಗಿರ್ತಿದ್ದೆ ಅಂತ...

    ReplyDelete
  2. Thanks for comment...:)
    yenagirthidri????

    ReplyDelete
  3. Ashwini allalla lilly ,chennagide ninna balya sangati.............its very very interesting.....add good as well bad things also .......andare kahi nanapugalu add madutta hogu.........i like the wordings what u wrote very much........good carry on further waiting for next......good luck

    shiva

    ReplyDelete
  4. Thanks for comment... Sure i will add many more good and bad memories :)and Thank you.

    ReplyDelete
  5. Really good to read.....nice writing skill...keep writing.....
    pl continue.....

    kushal here

    ReplyDelete
  6. ಗುಡ್ ಗುಡ್ ಗುಡ್.. ಬರೀತಿರಿ.. :-)

    ReplyDelete
  7. Very good effort of Sharing your School's life...
    Continue...
    :)

    ReplyDelete
  8. Read the blog... really interesting... Aaa Navodaya... dormitory-gaLu... MP hallu.. OLD mattu NEW mess gaLu... Assignment-gaLu, project-gaLu... kaddittu thinno thinisu-gaLu... PT-gaLu.... aaa boring class-gaLu... strict madam-gaLu, rasika sir-gaLu..(swalpa jana) OMG... eno onthara jagattu adu...

    Ree Ashwini-yavre....naanu Nimma house leader Netra avra class mate (96-02 batch)... 4 varsha maatra allidde..aamele sakaagi horage bande...

    Keep writing...

    - BDT

    ReplyDelete
  9. ಹದಭರಿತ ಬರವಣಿಗೆಯಲ್ಲಿ ನೆನಪುಗಳ ಬುತ್ತಿ ಬಿಚ್ಚಿಟ್ಟ ಪರಿ ಚೆನ್ನಾಗಿದೆ... ಖಂಡಿತಾ ಮುಂದುವರೆಸಬೇಕು. ವಿಶೇಷ ಬಗೆಯ ಅಶ್ವಿನಿ ಇವಳು ಅನ್ನೋ ಭಾವ ಮೂದಿಬರುತ್ತೆ ಓದಿದಾಗ.......ಬರಿತಾ ಇರು...

    ReplyDelete
  10. ಅಶ್ವಿನಿ,
    ಮುಂದುವರಿಸಲೇ ಬೇಕು. ತುಂಬ ಸೊಗಸಾಗಿ ವಾಸ್ತವದ ಚಿತ್ರಣ ಕೊಡೋ ಕಲೆ ನಿಮಗೆ ಸಾಧಿಸಿದೆ.

    ReplyDelete
  11. @ ರಾಘು-ಥ್ಯಾಂಕ್ಸ್ ಅಣ್ಣ.. :)
    @ ಸುನಾತ್- ಥ್ಯಾಂಕ್ಯು ಸರ್... :)
    @ ಬಸವರಾಜ್- ಥ್ಯಾಂಕ್ಸ್ ಅಣ್ಣ.. :)

    ReplyDelete
  12. ಚೆನ್ನಾಗಿ ಬರಿತೀರ...ಮು೦ದುವರಿಸಿ

    ReplyDelete
  13. Kalasada melondu huumaale adarallondistu nenapugalemba huvugalu,aa huvugalalli madhur suvasane,.......tumba ishtavayitu.

    Munduvarisala?..
    Olleya beginning madiddiya Ninnannnnu neenu prove madalu gondalaveke?
    Devendra

    ReplyDelete
  14. @Ashwini Kalasad..
    <<>
    ಈಗ ಏನಾಗಿದ್ದೀನೋ ಅದಂತೂ ಖಂಡಿತ ಆಗಿರ್ತಿರ್ಲಿಲ್ಲ. :-)

    ReplyDelete
  15. @ Digwas, Thank you sir. naanu nimma blog nodtirtini... it is really awesome.. :)

    ReplyDelete
  16. chennagide nin koli kaalin sankat..... but one thng u forgot to tel..... koli kaalin nadige....... yen speed ittu alva :)

    ReplyDelete
  17. ಹೌದಾ ದೀಪಾ? ಸಿಟ್ ಬಂದ್ರೆ ಫಾಸ್ಟ್ ನಡೀತಾಳೆ ಅಲ್ವಾ?

    ReplyDelete
  18. @ Deepa, Thanks kane.. hmu speedo speedu ... :)

    ReplyDelete
  19. ಬಾಲ್ಯ ಸದಾ ಹೀಗೆ... ಪುಳಕಗಳ ಸರಮಾಲೆ :)

    ReplyDelete