ಆಹಾ... !!! ಎಷ್ಟು ಸಖತ್ ಆಗಿತ್ತು ಆ ಜಾಗ... It is really amazing ..!!!
ಸುಮಾರು ಎತ್ತರದ ಎರಡು ಬೆಟ್ಟಗಳ ಮಧ್ಯದಲ್ಲಿ ಫಳಫಳನೆ ಹೊಳೆಯುವ ಒಂದು ಸುಂದರವಾದ ಮನೆ.. ಕಿಟಕಿ- ಬಾಗಿಲುಗಳನ್ನು ಪೂರ್ತಿಯಾಗಿ ಗಾಜಿ ನಿಂದ ಮಾಡಿದ್ರು. ಮನೆಯಿಂದ ಕೆಳಗಡೆ ಬರಬೇಕು ಅಂದ್ರೆ ಅಲ್ಲಿ ಯಾವ್ ದಾರಿಯೂ ಇರ್ಲಿಲ್ಲ, ಮನೆಯ ಬಾಗಿಲಿಂದ ನೇರವಾಗಿಯೇ ಇಳಿಯಬೇಕಿತ್ತು ಹಾಗಾಗಿ ಅಲ್ಲಿ ಒಂದು ಬೇರಿಂಗ್ ಇರೋ ಶೀಟ್ ಇತ್ತು. ಅದರ ಮೇಲೆ ನಿಂತ್ರೆ ಸಾಕು ಕೆಳಗಡೆ ಸುಯ್ ಅಂತ ಜಾರಿ ಬಂದ್ಬಿಡ್ತಾ ಇದ್ವಿ.. ಅದೇ ನಾವಿರೋ ಮನೆ. ಸುತ್ತಲೂ ಹಚ್ಚ ಹಸಿರು.. ಎಲ್ಲೆಲ್ಲೂ ಎತ್ತರೆತ್ತರದ ಬೆಟ್ಟಗಳು. ಒಮ್ಮೊಮ್ಮೆ snow ಫಾಲ್..!!
........
ಅಲ್ಲಿಂದ ಸ್ವಲ್ಪ ದೂರದಲ್ಲೇ university ಇತ್ತು.. ಅಲ್ಲಿ ನಾನು, ನನ್ ಫ್ರೆಂಡ್ಸ್ ಅಕ್ಷತಾ ಮತ್ತು ಉಷಾ MBA ಮಾಡೋಕೆ ಹೋಗಿದ್ವಿ.. ಆ ಬಿಲ್ಡಿಂಗ್ಸ್ ಮತ್ತು ಏರಿಯ ಸುಮಾರು ದೊಡ್ಡದು.. ಆದ್ರೆ ಪ್ರತಿಯೊಂದು ಡಿಪಾರ್ಟ್ಮೆಂಟ್ ಗೆ ಹೋಗೋದಕ್ಕೆ ಆಟೋ shortcuts ಇತ್ತು. ಕ್ಲಾಸಿಗೆ ಹೋಗೋ ಮುಂಚೆ ಅಲ್ಲಿದ್ದ ತ್ರಿಕೋನಾಕಾರದ ದೊಡ್ಡ ಹುಲ್ಲಿನ lawn ನಲ್ಲಿ ನಿಂತು ಪ್ರೇಯರ್ ಮಾಡಿಯೇ ಹೋಗ್ತಿದ್ವಿ.., ಒಂದು ದಿನ ಆ lawn ನಲ್ಲಿ ನನ್ ಮೊಬೈಲ್ ಕಳೆದುಹೋಯ್ತು . ಎಷ್ಟು ಹುಡುಕಿದರೂ ಸಿಗಲೇ ಇಲ್ಲ..
........
ಅಲ್ಲಿಯ ಎಲ್ಲ ಬಿಲ್ದಿಂಗ್ಸ್ ಒಂದು ಥರ ವಿಭಿನ್ನವಾಗಿದ್ವು. ಹಾಸ್ಟೆಲ್ ಅಂಡರ್ ಗ್ರೌಂಡ್ ನಲ್ಲಿ ಇತ್ತು. ಗಾಳಿ, ಬೆಳಕು ರೂಮಿನ ಎಲ್ಲ ಮೂಲೆ ಆವರಿಸಿದ್ದವು. ಯಾವಾಗಲೂ ತಂಪು ವಾತಾವರಣ ಓದೋಕೆ ಸಿಕ್ಕಾಪಟ್ಟೆ ಖುಷಿ, ಉತ್ಸಾಹ.. ಅಲ್ಲಿ ಎಲ್ಲವು automatic ಆಗಿ ಇತ್ತು. ನಾವು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ನಮ್ಮನ್ನು ಕರೆದುಕೊಂಡು ಹೋಗುವ ವ್ಯವಸ್ಥೆಯೊಂದಿತ್ತು. ಲಿಫ್ಟ್ ತರಹದ ಸಿಸ್ಟಮ್ ಬಟ್ ಅದು vertical ಆದ್ರೆ ಇಲ್ಲಿ horizontal ಮೂವಿಂಗ್ ಸಿಸ್ಟಮ್. ೫ ಜನರ ಕೆಪಾಸಿಟಿ ಹೊಂದಿರೋ ಒಂದು ರೂಮ್, ಅದ್ರಲ್ಲಿ ಕಂಪ್ಯೂಟರ್.. ನಾವು ಎಲ್ಲಿಗೆ ಹೋಗ್ಬೇಕು ಅಂತ ಟೈಪ್ ಮಾಡಿದರೆ ಸಾಕು ಅದು ಅಲ್ಲಿಗೆ ನಮ್ನ ಕರ್ಕೊಂಡು ಹೋಗ್ತಾ ಇತ್ತು. ನಿಜವಾಗಲು ಮಜವಾಗಿತ್ತು.. ಅಲ್ಲಿನ ಸಿಸ್ಟಮ್.. ಅಕ್ಕ ಕೂಡ ಅದೇ university ನಲ್ಲಿ ಬೇರೊಂದು ಕೋರ್ಸ್ ಮಾಡೋಕೆ ಬಂದಿದ್ಲು. ಅಕ್ಕ ಮನೇಲಿ ಇರ್ತಿದ್ಲು ನಾನು ನನ್ ಫ್ರೆಂಡ್ಸ್ ಜೊತೆ ಹಾಸ್ಟೆಲ್ನಲ್ಲಿ ಇರ್ತಿದ್ದೆ.
.......
ಮಧ್ಯಾಹ್ನ ಮಲಗಿ, ೪ ಗಂಟೆಗೆ ಥಟ್ಟಂತ ಎಚ್ಚರವಾಯ್ತು. ಮೊಬೈಲ್ ನೋಡಿದೆ ೩ ಗಂಟೆಗೆ missed call. ವಾಪಸ್ ಕಾಲ್ ಮಾಡಿದೆ.. ಆ ಕಡೆ ಇಂದ ನನ್ನ ಹುಡುಗ..
' ಎಲ್ಲಿಗೆ ಹೋಗಿದ್ದೆ...??? ೩ ಗಂಟೆಗೆ ನಾನು ಕಾಲ್ ಮಾಡಿದ್ನಲ್ಲ.. (ದಿನ ೨.೩೦ ಗೆ ಕಾಲ್ ಮಾಡೋದು ಇವತ್ತು ಲೇಟ್ ಆಗಿತ್ತು )' ...
ಅಯ್ಯೋ ನನ್ನ ಮೊಬೈಲ್ ಕಳೆದು ಬಿಟ್ಟಿತ್ತು ...
' ಎಲ್ಲಿ '.. ?
"lawn" ನಲ್ಲಿ ...
'ಹಾ'.. !!!!
ಅಯ್ಯೋ... ಇಲ್ಲ ಕಣೋ ಅದು ನನ್ ಕನಸಲ್ಲಿ ಬಿಡು.. ಅಂತ ಹೇಳಿ, ಇಬ್ರೂ ಸ್ಮೈಲ್ ಮಾಡಿ ಮಾತು ಮುಂದು ವರ್ಸಿದ್ದಾಯ್ತು.. :-)
ಹೇಳೋದ್ ಮರ್ತಿದ್ದೆ : ನಾನು ಓದೋಕೆ ಹೋಗಿರೋ University "Harvard University " .. :-) :-)
ನನ್ನ ಕನಸಿನ imagination ನೀವು ಮಾಡ್ಕೊಳ್ಳಿ ಮತ್ತೆ ನೀವು ಮಜಾ ಮಾಡಿ.. :-) :-)
Lovely Dream.. ... Sorry.. chinnu for waking u up from ur dream.....
ReplyDeleteLike see more n more beautiful dreams....
ReplyDeleteok ok thank u... :-)
Deleteಮಸ್ತ್ ಕನಸು..
ReplyDelete:-) Manasu.. :-)
Deleteಚೆನ್ನಾಗಿದೆ ನಮ್ಮ ಬ್ಲಾಗ್ ಗೂ ಒಮ್ಮೆ ಭೇಟಿ ನೀಡಿ ಸ್ವಾಮೀ...
ReplyDeletehttp://ravindratalkies.blogspot.in