ನಿಲ್ಲೆಂದರೆ ನಿಂತೀತೇ ಆ ವೇಳೆ !
ದಿನವೂ ಅದೇ ಗಡಿಬಿಡಿ, ಅದೇ ವೇಗದ ಓಟ
ಅವನಪ್ಪುಗೆಯನೂ ಸಂಜೆಗೆ ಮುಂದೂಡಿ,
ಓಡಿಸುತಿದೆ ಕಾಲ!
ಮಗ ಮತ್ತು ಬ್ಯಾಗುಗಳೊಂದಿಗೆ
ಗಾಡಿ ಏರಿ ಭರ್ರೆಂದು ಹೋಗುವ ಆ ಪಾರ್ಕಿನ ದಾರಿ,
'ಆಗಷ್ಟೇ ಭೂ ತಾಯಿಯ ಮಡಿಲ ಬಿಟ್ಟು
ಜಾಗ ಸಾವರಿಸಿಕೊಂಡು ಗಾಡಿ ಏರಿ ಕೂತ
ತಾಜಾ ಸೊಪ್ಪು-ತರಕಾರಿಗಳು
ಹಾಗೂ
ಬಣ್ಣ-ಬಣ್ಣದ ಗುಲಾಬಿ ಹೂಗಳು'
ಮರೆಸುವವು ಓಡುತಿರುವ ವೇಳೆಯನೂ,
ಅವನಪ್ಪುಗೆಯನೂ...
- ನೈದಿಲೆ